ಶುಕ್ರವಾರ, ಡಿಸೆಂಬರ್ 18, 2009

ನಾನು ಮೀರಾ, ನೀನಾ ಮಾಧವ..?

ನಾನು ಮೀರಾ.....


ನೀನಾ ಮಾಧವ.....?

ಕಳೆದುಕೊಳ್ಳುವ ಭಯವೇ ಇಲ್ಲದೆ

ನಾ ಕೊಟ್ಟೆನೆಲ್ಲವ....,

ನಾನೂ ಕೊಡಬೇಕೆಂಬುದ ಮರೆತು

ಪಡೆದೆ ನೀನೆಲ್ಲವ !

ನೀನಾ ಮಾಧವ......?

ಸುಮ್ಮನೆ ನೀಡಿದೆ ಏನೂ ಕೇಳದೆ

ನನ್ನೊಡಲ ದಿವ್ಯ ಪ್ರೀತಿಯ,

ಏನೂ ಹೇಳದೆ ಸುಮ್ಮನೆ ಸವಿದೆ

ಆ ಅಧಮ್ಯ ಸುಖವ !

ನೀನಾ ಮಾಧವ......?

ನಾ ಕೊಟ್ಟ ನಿರಪೇಕ್ಷ ಪ್ರೀತಿಯ

ಶ್ವಾಸವನೆ ತೆಗೆದು ಬದುಕಲು ಹೊರಟವ!

ನೀನಾ ಮಾಧವ........?

ನೀನಲ್ಲ ಮಾಧವ..!!!

ಆದರು ನಾನು ಮೀರಾ.....!!!!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ