ಶುಕ್ರವಾರ, ಡಿಸೆಂಬರ್ 18, 2009

ಸತ್ಯ - ಮಿಥ್ಯ

ಕನಸು ಮಸುಕಾದ ವೇಳೆ


ಆ ಮುಸುಕಿನೊಳಗೆ ಹುದುಗಿ,

ಕನಸೇ ಕಂಡಿಲ್ಲವೆಂದರೆ

ಮುನಿಯದಿದ್ದೀತೆ ಬದುಕು...?

ಕನಸಿನೊಳಗೆ ಬದುಕ ಸವೆಸಿ,

ನನಸಾಗದ ಕನಸಿಗೆ ಹಂಬಲಿಸಿ,

ಕನಸುಗಳೇ ಸುಳ್ಳೆಂದರೆ....

ಸುಮ್ಮನಿದ್ದೀತೆ ಬದುಕು......?

ಕನಸೇ ನೀಡಿದ್ದ ಕಣ್ಣೊಳಗಿನ ಹೊಳಪು,

ಹೊಳಪಿನಾಳದ ಹನಿಗಳು ಹರಿದು

ಹೊರಬಂದ ವೇಳೆ...

ಕನಸುಗಳೇ ಸಲ್ಲದು ಎಂದರೆ

ಮನ್ನಿಸೀತೆ ಬದುಕು......!!!???

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ